ಬ್ಯಾಂಕಿಂಗ್ (BANKING) ಕ್ಷೇತ್ರದಲ್ಲಿ ಉನ್ನತ ಹುದ್ದೆ ಅಲಂಕರಿಸಬೇಕು, ಅದೂ ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI BANK) ನಲ್ಲಿ ಕೆಲಸ ಮಾಡಬೇಕು ಎಂಬುದು ಅನೇಕರ ಕನಸು. ಈಗ ಆ ಕನಸನ್ನು ನನಸಾಗಿಸುವ ಸಮಯ ಬಂದಿದೆ. ಎಸ್‌ಬಿಐ (SBI BANK RECRUITMENT) ಇತ್ತೀಚೆಗೆ ವಿಶೇಷ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ಅರ್ಹ ವೃತ್ತಿಪರರಿಂದ ಅರ್ಜಿ ಆಹ್ವಾನಿಸಿದೆ.
ಈ ನೇಮಕಾತಿಯ ವಿಶೇಷತೆ ಏನು? ಯಾರಿಗೆಲ್ಲಾ ಅವಕಾಶವಿದೆ? ಅರ್ಜಿ ಸಲ್ಲಿಸುವುದು ಹೇಗೆ? ಈ ಎಲ್ಲಾ ವಿವರಗಳು ಇಲ್ಲಿವೆ.

ಹುದ್ದೆಯ ವಿವರಗಳು
ಎಸ್‌ಬಿಐ ಪ್ರಸ್ತುತ ‘ಸ್ಪೆಷಲಿಸ್ಟ್ ಕೇಡರ್ ಆಫೀಸರ್’ (SCO) ವಿಭಾಗದ ಅಡಿಯಲ್ಲಿ ಒಟ್ಟು 8 ಲೀಡ್ ಬಿಸಿನೆಸ್ ಅನಾಲಿಸ್ಟ್ (Lead Business Analyst) ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡುತ್ತಿದೆ.
ಪ್ರಮುಖ ಮಾಹಿತಿ ಒಂದು ನೋಟದಲ್ಲಿ:
| ವಿವರ | ಮಾಹಿತಿ |
| ಹುದ್ದೆಯ ಹೆಸರು | ಲೀಡ್ ಬಿಸಿನೆಸ್ ಅನಾಲಿಸ್ಟ್ (Lead Business Analyst) |
| ಒಟ್ಟು ಹುದ್ದೆಗಳು | 08 |
| ವಾರ್ಷಿಕ ವೇತನ | ಅಂದಾಜು ₹45 ಲಕ್ಷ |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | ಮೇ 4, 2026 |
| ಅಧಿಕೃತ ವೆಬ್‌ಸೈಟ್ | bank.sbi/careers |
ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ತಾಂತ್ರಿಕ ಅಥವಾ ಮ್ಯಾನೇಜ್‌ಮೆಂಟ್ ಹಿನ್ನೆಲೆಯನ್ನು ಹೊಂದಿರಬೇಕು.
-
ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ BE/B.Tech, MCA, M.Tech/M.Sc ಅಥವಾ MBA ಪದವಿ ಪಡೆದಿರಬೇಕು.
-
ಅನುಭವ: ಕೇವಲ ಪದವಿ ಸಾಕಾಗುವುದಿಲ್ಲ, ಸಂಬಂಧಿತ ಕ್ಷೇತ್ರದಲ್ಲಿ ಕೆಲಸದ ಅನುಭವವಿರುವುದು ಕಡ್ಡಾಯ.
-
ವಯೋಮಿತಿ: 31 ಮಾರ್ಚ್ 2026ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳ ವಯಸ್ಸು 30 ರಿಂದ 40 ವರ್ಷಗಳ ನಡುವೆ ಇರಬೇಕು.
ಲಿಖಿತ ಪರೀಕ್ಷೆ ಇಲ್ಲದೆ ಆಯ್ಕೆ!
ಸಾಮಾನ್ಯವಾಗಿ ಬ್ಯಾಂಕ್ ಕೆಲಸ ಅಂದಾಕ್ಷಣ ಕಠಿಣವಾದ ಲಿಖಿತ ಪರೀಕ್ಷೆಗಳು ನೆನಪಾಗುತ್ತವೆ. ಆದರೆ ಈ ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. 1. ಮೊದಲಿಗೆ ಅಭ್ಯರ್ಥಿಗಳ ಪ್ರೊಫೈಲ್ ಮತ್ತು ಅನುಭವದ ಆಧಾರದ ಮೇಲೆ ಅವರನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.
2. ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ (Direct Interview) ಕರೆಯಲಾಗುತ್ತದೆ.
3. ದಾಖಲೆಗಳ ಪರಿಶೀಲನೆ (Documents Verifictaion) ಮತ್ತು ಸಂದರ್ಶನದ (Interview) ಪ್ರದರ್ಶನದ ಆಧಾರದ ಮೇಲೆ ಅಂತಿಮ ಆಯ್ಕೆ ನಡೆಯಲಿದೆ.
ಅರ್ಜಿ ಶುಲ್ಕ ಎಷ್ಟು?
-
ಸಾಮಾನ್ಯ (General), OBC ಮತ್ತು EWS ಅಭ್ಯರ್ಥಿಗಳಿಗೆ: ₹750
-
SC/ST ಮತ್ತು ವಿಕಲಚೇತನ (PwBD) ಅಭ್ಯರ್ಥಿಗಳಿಗೆ: ಯಾವುದೇ ಅರ್ಜಿ ಶುಲ್ಕವಿಲ್ಲ (ಉಚಿತ).

ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಎಸ್‌ಬಿಐನ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.
-
ಮೊದಲು ಎಸ್‌ಬಿಐನ ಕೆರಿಯರ್ (SBI CARRIER PORTAL) ಪೋರ್ಟಲ್‌ಗೆ ಭೇಟಿ ನೀಡಿ.
-
ಅಧಿಸೂಚನೆಯನ್ನು ಪೂರ್ತಿಯಾಗಿ ಓದಿಕೊಂಡು, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
-
ನಿಗದಿತ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆಯನ್ನು ಪೂರ್ಣಗೊಳಿಸಿ.
ನೆನಪಿಡಿ: ಅರ್ಜಿ ಸಲ್ಲಿಸಲು ಮೇ 4, 2026 ಕೊನೆಯ ದಿನಾಂಕವಾಗಿದೆ. ಕೊನೆಯ ಕ್ಷಣದ ಸವಾಲುಗಳನ್ನು ತಪ್ಪಿಸಲು ಇಂದೇ ಅರ್ಜಿ ಸಲ್ಲಿಸುವುದು ಉತ್ತಮ.
ನೀವು ಐಟಿ ಅಥವಾ ಮ್ಯಾನೇಜ್‌ಮೆಂಟ್ ಕ್ಷೇತ್ರದಲ್ಲಿ ಅನುಭವ ಹೊಂದಿದ್ದು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಬ್ರೇಕ್ ನಿರೀಕ್ಷಿಸುತ್ತಿದ್ದರೆ, 45 ಲಕ್ಷ ರೂಪಾಯಿಗಳ ಈ ಪ್ಯಾಕೇಜ್ ಖಂಡಿತವಾಗಿಯೂ ನಿಮ್ಮ ವೃತ್ತಿಜೀವನಕ್ಕೆ ಹೊಸ ವೇಗ ನೀಡಬಲ್ಲದು.!






