ಕನ್ನಡ ಕಿರುತೆರೆ ಹಾಗೂ ಹಿರಿತೆರೆಯ ಜನಪ್ರಿಯ ನಟಿ ಸಂಗೀತಾ ಭಟ್ (Sangeetha Bhat) ಅವರು ‘ಬಿಗ್ಬಾಸ್ ಕನ್ನಡ ಸೀಸನ್ 13’ (Bigg Boss Kannada Season 13) ಮನೆಯಿಂದ ಅಧಿಕೃತವಾಗಿ ಹೊರಬಂದಿದ್ದಾರೆ. ಹೌದು, ಕಳೆದ ಕೆಲವು ದಿನಗಳಿಂದ ಅವರ ಆರೋಗ್ಯದಲ್ಲಿ ಉಂಟಾದ ತೀವ್ರ ಏರುಪೇರೇ ಈ ಅನಿರೀಕ್ಷಿತ ನಿರ್ಧಾರಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಬಿಗ್ಬಾಸ್ ಮನೆಯಲ್ಲಿ ಏನಾಯಿತು?
ಬಿಗ್ಬಾಸ್ ಮನೆಯಲ್ಲಿ ನಡೆದ ಕಠಿಣ ಟಾಸ್ಕ್ಗಳು ಹಾಗೂ ಇತ್ತೀಚಿನ ಸೈಕೋಲಾಜಿಕಲ್ ಮತ್ತು ಭಾವನಾತ್ಮಕ ಒತ್ತಡಗಳು ಸ್ಪರ್ಧಿಗಳ ಮೇಲೆ ಭಾರೀ ಪರಿಣಾಮ ಬೀರಿದ್ದವು. ಅದರಲ್ಲೂ ‘ಗಂಧರ್ವರು ಮತ್ತು ರಾಕ್ಷಸರು’ ಟಾಸ್ಕ್ ಹಾಗೂ ಮನೆಯೊಳಗಿನ ತೀವ್ರ ವಾಗ್ವಾದಗಳ ಸಂದರ್ಭದಲ್ಲಿ ಸಂಗೀತಾ ಭಟ್ ಅವರಿಗೆ ತೀವ್ರ ಉಸಿರಾಟದ ಸಮಸ್ಯೆ (Breathing Issue) ಹಾಗೂ ಆತಂಕ ಕಾಡಿತ್ತು.
ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ತಕ್ಷಣವೇ ಮನೆಯಿಂದ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ವೈದ್ಯರ ಸಲಹೆ ಮತ್ತು ನಿರಂತರ ಆರೋಗ್ಯ ಸಮಸ್ಯೆಯ ಕಾರಣದಿಂದ ಅವರು ಬಿಗ್ಬಾಸ್ ಆಟವನ್ನು ಮುಂದುವರಿಸಲು ಸಾಧ್ಯವಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.
ಪ್ರಮುಖHighlights:
ಆರೋಗ್ಯವೇ ಪ್ರಾಮುಖ್ಯತೆ: ಬಿಗ್ಬಾಸ್ ಮನೆಯ ಆಟಕ್ಕಿಂತ ಸ್ಪರ್ಧಿಗಳ ಆರೋಗ್ಯ ಮುಖ್ಯವಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಅಭಿಮಾನಿಗಳಿಗೆ ಬೇಸರ: ಉತ್ತಮ ಆಟದ ಮೂಲಕ ಸೈ ಎನಿಸಿಕೊಳ್ಳುತ್ತಿದ್ದ ಸಂಗೀತಾ ಭಟ್ ಅಧ್ಭುತವಾಗಿ ಆಡುತ್ತಿದ್ದರು. ದಿಢೀರ್ ಅಂತ ಅನಾರೋಗ್ಯದ ಕಾರಣದಿಂದ ಹೊರಬಂದಿರುವುದು ಅವರ ಅಭಿಮಾನಿಗಳಿಗೆ ತೀವ್ರ ನಿರಾಶೆ ಮೂಡಿಸಿದೆ.

ವೈರಲ್ ಆದ ವಿಡಿಯೋಗಳು: ಸಂಗೀತಾ ಅನಾರೋಗ್ಯದಿಂದ ಬಳಲುತ್ತಿದ್ದಾಗ ಇತರೆ ಸ್ಪರ್ಧಿಗಳು ಆತಂಕಗೊಂಡು ಸಹಾಯ ಮಾಡಿದ್ದ ದಶ್ಯಗಳು ಹಾಗೂ ಅವರನ್ನು ಆಸ್ಪತ್ರೆಗೆ ಕರೆದೊಯ್ದ ಕ್ಲಿಪ್ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.
ಸಂಗೀತಾ ಭಟ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಬಿಗ್ಬಾಸ್ ವೀಕ್ಷಕರು ಹಾಗೂ ಅಭಿಮಾನಿಗಳು ಹಾರೈಸುತ್ತಿದ್ದಾರೆ.



